ಚಿತ್ರ: ಗುರಿ

ಸಾಹಿತ್ಯ: ಚಿ.ಉದಯಶಂಕರ್
ಸಂಗೀತ: ರಾಜನ್-ನಾಗೇಂದ್ರ
ಗಾಯನ: ಡಾ| ರಾಜ್‍ಕುಮಾರ್

ಅಲ್ಲಾ ಅಲ್ಲಾ, ನೀನೇ ಎಲ್ಲಾ... ||೨||
ನಿನ್ನನು ಬಿಟ್ಟರೆ ಗತಿಯಾರಿಲ್ಲ
ನಿನ್ನದೆ ಜಗವೆಲ್ಲ
ನಿನ್ನನು ಬಿಟ್ಟರೆ ಗತಿಯಾರಿಲ್ಲ

ನಿನ್ನದೆ ಜಗವೆಲ್ಲ

|| ಲಾ ಇಲಾಹಿ ||

ಅಲ್ಲಾ ಅಲ್ಲಾ, ನೀನೇ ಎಲ್ಲಾ...
ಅಲ್ಲಾ ಅಲ್ಲಾ, ನಿನ್ನದೆ ಎಲ್ಲಾ...

ಬೀಸುತ ಓಡುವ ತಂಬೆಲರೆಲ್ಲಾ
ಬಾನಲಿ ಹಾರುವ ಹಕ್ಕಿಗಳೆಲ್ಲಾ
ಬೀಸುತ ಓಡುವ ತಂಬೆಲರೆಲ್ಲಾ
ಬಾನಲಿ ಹಾರುವ ಹಕ್ಕಿಗಳೆಲ್ಲಾ

ಕಡಲಲ್ಲಿ ಏಳುವ ಅಲೆ ಅಲೆಯಲ್ಲಾ

ಅಲ್ಲಾ ಅಲ್ಲಾ ಎನುತಿದೆಯಲ್ಲಾ ||೨||

ಅಲ್ಲಾ ಅಲ್ಲಾ ಯಾ ಅಲ್ಲಾ
ಅಲ್ಲ ಅಲ್ಲಾ, ನೀನೇ ಎಲ್ಲಾ...ಹಾಯ್ ಅಲ್ಲಾ
ನಿನ್ನನು ಬಿಟ್ಟರೆ ಗತಿಯಾರಿಲ್ಲ
ನಿನ್ನದೆ ಜಗವೆಲ್ಲಾ

ನನ್ನ ಬಾಳಲ್ಲಿ ನೆಮ್ಮದಿಯಿಲ್ಲಾ
ಎಲ್ಲೆಡೆ ಕತ್ತಲೆ ತುಂಬಿದೆಯಲ್ಲಾ
ದಾರಿಯ ತೋರುವವರಾರು ಇಲ್ಲಾ ||೨||
ನೀ ಕೈಬಿಟ್ಟರೆ ಬದುಕೇ ಇಲ್ಲಾ.....ಅಲ್ಲಾ

ಅಲ್ಲಾ ಅಲ್ಲಾ, ನೀನೇ ಎಲ್ಲಾ...

ನಿನ್ನನು ಬಿಟ್ಟರೆ ಗತಿಯಾರಿಲ್ಲ
ನಿನ್ನದೆ ಜಗವೆಲ್ಲಾ

ಯಾಲ್ಲ ಅಲ್ಲಾ ಯಾ ಅಲ್ಲಾ ||೩||

ಅಲ್ಲಾ ಎಂದರೆ ಕಷ್ಟಗಳಿಲ್ಲಾ
ಅಲ್ಲಾ ಎಂದರೆ ವೇದನೆಯಿಲ್ಲಾ

ಅಲ್ಲಾ ಎಂದರೆ ಕಷ್ಟಗಳಿಲ್ಲ, ಯಾ ಅಲ್ಲಾ
ಅಲ್ಲಾ ಎಂದರೆ ವೇದನೆಯಿಲ್ಲ, ಹಾಯ್ ಅಲ್ಲಾ

ಅಲ್ಲಾ ನೀನು ದಯೆ ತೋರಿದರೆ
ಮುಳ್ಳು ಹೂವಾಗಿ ಅರಳುವುದಲ್ಲಾ ||೨||

ಅಲ್ಲಾ ಅಲ್ಲಾ, ನೀನೇ ಎಲ್ಲಾ...

ನಿನ್ನನು ಬಿಟ್ಟರೆ ಗತಿಯಾರಿಲ್ಲ
ನಿನ್ನದೇ ಜಗವೆಲ್ಲಾ

||ಲಾಹಿ ಲಾಹ||

ಅಲ್ಲಾ........................
(ಹಿನ್ನೆಲೆ) ಅಲ್ಲಾ ಅಲ್ಲಾ, ನೀನೇ ಎಲ್ಲಾ...ಅಲ್ಲಾ ಅಲ್ಲಾ, ನಿನ್ನದೆ ಎಲ್ಲಾ ||೩||

Category: ಕನ್ನಡ ಚಿತ್ರಸಾಹಿತ್ಯ
ವರ್ಗ: ಗುರಿ ಚಿತ್ರ
ವರ್ಗ: ಚಿ.ಉದಯಶಂಕರ್ ಸಾಹಿತ್ಯ
ವರ್ಗ: ಡಾ.ರಾಜ್‍ಕುಮಾರ್ ಗಾಯನ